Back
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ

ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ

ನಿಗಮದಿಂದ ಕೊಡಗು ಜಿಲ್ಲೆಗೆ ನಿಯೋಜಿಸಿರುವ ಹುದ್ದೆಗಳು

ಕ್ರ. ಸಂ ಹುದ್ದೆ ಜಿಲ್ಲೆಗೆ ನಿಯೋಜಿಸಿರುವ ಹುದ್ದೆಗಳ ಸಂಖ್ಯೆ ಭರ್ತಿ ಮಾಡಿರುವ ಹುದ್ದೆ ಖಾಲಿ ಇರುವ ಹುದ್ದೆ
1 ಜಿಲ್ಲಾ ವ್ಯವಸ್ಥಾಪಕರು 0 1 0
2 ಸಹಾಯಕ ಜಿಲ್ಲಾ ವ್ಯವಸ್ಥಾಪಕರು 1 0 0
3 ತಾಲ್ಲೂಕು ಅಭಿವೃದದಿ ಅಧಿಕಾರಿಗಳು 2 1 1
4 ಕಚೇರಿ ಅಧೀಕ್ಷಕರು 0 0 0
5 ಪ್ರಥಮ ದರ್ಜೇ ಸಹಾಯಕರು 1 0 1
6 ಲೆಕ್ಕ ಸಹಾಯಕರು 1 0 1
7 ದ್ವಿತಿಯ ದರ್ಜೆ ಸಹಾಯಕರು/ ಕಂಪ್ಯೂಟರ್ ಆಪರೇಟರ್ 1 0 1
8 ಕಂಪ್ಯೂಟರ್ ಆಪರೇಟರ್/ ಕಂಪ್ಯುಟರ್ ಟೈಪಿಸ್ಟ್ 0 0 0
9 ವಾಹನ ಚಾಲಕರು 0 0 0
10 ದಲಾಯತರು 0 0 0
ಒಟ್ಟು 6 2 4

2021-22 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುವ ಯೋಜನೆಗಳು

ಸ್ವಯಂ ಉದ್ಯೋಗ ನೇರಸಾಲ ಯೋಜನೆ :

ಪರಿಶೀಷ್ಟ ಜಾತಿಯ ಯುವಕ/ ಯುವತಿಯರಿಗೆ ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಘಟಕ ವೆಚ್ಚ ರೂ. 50,000/- ಇದ್ದು, ರೂ. 25,000/- ಸಹಾಯಧನ ಹಾಗೂ ರೂ. 25,000/- ಅಂಚಿನಹಣ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುವುದು.

ಉದ್ಯಮ ಶೀಲತಾ ಯೋಜನೆ -ಐ.ಎಸ್.ಬಿ (ಬ್ಯಾಂಕುಗಳ ಸಹಯೋಗದಿಂದ) :

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಪರಿಶೀಷ್ಟ ಜಾತಿಯ ನಿರುದ್ಯೋಗ ಯುವಕ/ ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಂದ ಸಹಾಯಧನ ಮತ್ತು ಬ್ಯಾಂಕಿನ ಸಾಲದೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ.

ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷ ಸಹಾಯಧನ, ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ ರೂ.3.50 ಲಕ್ಷಗಳ ಸಹಾಯಧನ ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ:

ಪರಿಶಿಷ್ಟ ಜಾತಿಯ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಮೂಹಿಕ ಉತ್ಪಾದನಾ/ಸೇವಾ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುವುದು. 10 ಸದಸ್ಯರ ಒಂದು ಗುಂಪಿಗೆ ರೂ. 2,50,000/- ಮಂಜೂರು ಮಾಡಲು ಅವಕಾಶವಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೆ ರೂ. 15,000/- ಸಹಾಯಧನ ರೂ.10,000/- ಬೀಜಧನಸಾಲ ಒಟ್ಟು ರೂ.25,000/- ಹಣವನ್ನು ಸಂಘದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.

ಗಂಗಾಕಲ್ಯಾಣ ಯೋಜನೆ: ವೈಯುಕ್ತಿಕ ನೀರಾವರಿ:

ಕನಿಷ್ಟ 1.00 ಎಕರೆ ಖುಷ್ಕಿ ಜಮೀನಿರುವ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿನಲ್ಲಿ ತೆರೆದ ಬಾವಿ/ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ರೂ.3.00 ಲಕ್ಷ ಸಹಾಯಧನ ಮತ್ತು ರೂ.0.50 ಲಕ್ಷ ಅವಧಿಸಾಲವಾಗಿರುತ್ತದೆ.

ಭೂ ಒಡೆತನ ಯೋಜನೆ :

ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ರೂ.15.00ಲಕ್ಷ ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ ೫೦ ಸೆಂಟ್ಸ್ ತರಿ/ಬಾಗಾಯ್ತು ಅಥವಾ 1.00 ಎಕರೆ ಖುಷ್ಕಿ ಜಮೀನನ್ನು ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುವುದು. ಘಟಕ ವೆಚ್ಚದಲ್ಲಿ ಶೇ.50% ಭಾಗ ಸಹಾಯಧನ ಹಾಗೂ ಶೇ.50% ಭಾಗ ಅವಧಿ ಸಾಲವಾಗಿದ್ದು, ಶೇ.6%ರ ಬಡ್ಡಿ ದರದಲ್ಲಿ ನಿಗಮದಿಂದಲೇ ನೀಡಲಾಗುವುದು. ಖರೀದಿಸುವ ಜಮೀನು ಫಲಾನುಭವಿಯು ವಾಸಿಸುವ ಸ್ಥಳದಿಂದ ಗರಿಷ್ಟ 10 ಕಿ.ಮೀ. ವ್ಯಾಪ್ತಿಯಲ್ಲಿರಬೇಕು. ಜಮೀನು ಮಾರಾಟ ಮಾಡುವವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು ಫಲಾನುಭವಿಗಳು ಸಾಲದ ಹಣವನ್ನು ಬಡ್ಡಿ ಸಮೇತವಾಗಿ ಹತ್ತು ವರ್ಷಗಳಲ್ಲಿ ಪ್ರತಿ 06 ತಿಂಗಳಿಗೊಮ್ಮೆ 20 ಸಮಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು.


ನಿಗಮದ ಯೋಜನೆಗಳ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು


ಅರ್ಜಿದಾರರು ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:


ಡಾ|| ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಸೌಲಭ್ಯ ಕೋರಿ ಈ ಕೆಳಕಂಡ ಪರಿಶಿಷ್ಟ ಜಾತಿಯ ಉಪ ಜಾತಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

×
ABOUT DULT ORGANISATIONAL STRUCTURE PROJECTS